ವಾಸ್ತುಪ್ರಕಾರ

ಕರಾಗ್ರ
ವಸತೇ ಬೀರು
ಕರಮಧ್ಯೆ
ಕಿಂಗ್ ಫಿಷರ್
ಕರಮೂಲೆ
ಕಂಟ್ರಿ ಸಾರಾಯಿ
ಬೆಳಗೆದ್ದು
ಬಾರ್ ದರ್ಶನಂ
ನಾವು
ಬಾರಲ್ಲೇ ಎದ್ದು ಬೀರಲ್ಲೇ ಮುಖ ತೊಳಯೋರು ಸಾ..
ಮದ್ಯ
ಮಿಶ್ರ ಮೂತ್ರ ಮೃತ್ಯು ಮೇಷ್ಟ್ರು ಮೋಕ್ಷ ಮೌಲ್ಯ ಮಂತ್ರ ಮದಿರ ಮಿಲನ ಮಧುರ ಮಲಿನ ಮೆದುಳು ಮಾರ್ಜಿನ
ಮನ್ವಂತರ
ಮನೋವಿಕಾರ ಮತಿಭ್ರಮಣ ಮಹಾಮಾರಣ
ಅಯ್ಯೋ
ಇವರ್ದ್ ಇದ್ದಿದ್ದೃ ರಾಮಾಯ್ಣ
ಬನ್ನಿ
ಸಾರ್ ಬಾರ್ಗ್ ಹೋಗಣ…!
ಲೋಟದ್
ತುಂಬಾ ರಮ್ಮು.. ಎಳೆಯೋದಕ್ಕೆ ಧಮ್ಮು
ನಂಚ್ಕೊಳ್ಳೋಕೆ
ಚಿಪ್ಸು.. ಹಂಚ್ಕೊಳ್ಳೋಕೆ ಫೀಲಿಂಗ್ಸ್
ನಮ್ಮ
ಲೈಫೇne ಒಂದು ಕಾಕುಟೇಲು ಸ್ವಾಮಿ ಮಿಕ್ಸು ಮಾಡ್ತೀರಾ?
ಫುಲ್
ಬಾಟ್ಲನ್ನೇ ಹಿಂಡಿ ಪೋಟ್ಕೋತೀವಿ ನಾವು ವಾಸ್ತುಪ್ರಕಾರ
ಬಾಯಿ
ಬೀರು ಬಾಟ್ಲು ಬಿಲ್ಲು ಬಾರು
ಬೈಗುಳ
ಬಟಾಣಿ ಬಾಂಬೇ ಬೀಸಣಿಗೆ
ಮನ್ಸಲ್ಯಾಕೋ
ಬೇಜಾರು ಬೆನ್ ಮೇಲ್ ಬೆವರು
ಮದ್ಯ
ವರ್ಸಸ್ ಪದ್ಯ.. ಬ್ರಾಂತಿ ವರ್ಸಸ್ ಕ್ರಾಂತಿ.. ಕೆರ ವರ್ಸಸ್ ಜ್ವರ.. ಬ್ರಾಂಡು ವರ್ಸಸ್ ತಮಟೆ ಸೌಂಡು.. ವಾಮಿಟ್ಟು ವರ್ಸಸ್ ಅಡ್ಮಿಟ್ಟು.. ವ್ಯಸನ ವರ್ಸಸ್ ಸ್ಮಶಾನ.. ಬೋರ್ವಿಟಾ ವರ್ಸಸ್ ಬಾಡೂಟ.. ಕಲಬೆರಕೆ ವರ್ಸಸ್ ಎಲೆಅಡಿಕೆ.. ಬೋರ್ ವೆಲ್ಲು ವರ್ಸಸ್ ಡೈರಿ ಹಾಲು..
ಬಸ್ಸಾರು
ವರ್ಸಸ್ ಸೆನ್ಸಾರು..
ಲಾಸ್ಟ್
ಬಾಲ್ ಇಸ್ ಎ ಬೌನ್ಸರ್ ಅಂಡ್ ಬಸಂತಿ ಇಸ್ ಎ ಡ್ಯಾನ್ಸರ್
ಮೂವತ್ತೇ
ನಿಮಿಷಗಳಲ್ಲಿ ಇಂಗ್ಲೀಷ್ ಕಲಿಯಿರಿ ಶರತ್ತುಗಳು ಅನ್ವಯ
ಹೆಂಡ್ತಿ
ಕೊಟ್ಲು ಡೈವೋರ್ಸ್.. ಬಿಸಿನೆಸ್ಸು ಉಡೀಸ್
ಕುಡಿಯೋಕ್
ಬೇಕಾ ಕಾರಣ.. ಒಂದ್ ಪೆಗ್ಗು ಹಾಕು ಬಾರಣ್ಣ
ಕುಡಿಯೋರ್ಗೊಂದ್ ರೀಸನ್
ಬೇಕಾಗಿಲ್ಲ ಎಲ್ಲಾ ಅವ್ರ್ವರ್ ಗ್ರಾಚಾರ
ಬ್ರಮ್ಮಂಗೆ
ನೈಂಟಿ ಕುಡಸ್ಬೇಕು ನೀವು ವಾಸ್ತುಪ್ರಕಾರ
ಮನೆಲ್ಲೋಂದ್
ಸುಳ್ ಹೇಳಿ ಕತ್ಲಾಗ್ತಿದಂಗೆ ಫ್ರೆಂಡ್ಸ್ ಕರ್ಕೊಂಡ್ ಬಾರ್ ಸೇರ್ಕೊಳಿ.. ಸೇರ್ಕೊಂಡೋ..
ನಿಮ್
ಬ್ರಾಂಡ್ ಆರ್ಡರ್ ಮಾಡಿ ಈಶಾನ್ಯ ಮೂಲೆಲಿರೋ ಕೋನೆ ಟೇಬಲ್ಲಿನ ಬಲಗಡೆ ಕೂತ್ಕೊಳಿ.. ಕೂತ್ಕೊಂಡೋ..
ಆರ್ಡರ್
ಬರತ್ತೆ ಸೋಡಾ ನೀರನ್ನ ತ್ರೀ ಈಸ್ ಟು ಒನ್ ರೇಷ್ಯೋದಲ್ಲಿ ಲೋಟಕ್ ಹುಯ್ಕೊಳಿ.. ಹುಯ್ಕೊಂಡೋ
ಎಡಗೈಲಿ
ಮೂಗ್ ಮುಚ್ಕೊಂಡು ಬಲಗೈಲಿ ಗ್ಲಾಸ್ ಹಿಡ್ಕಂಡು ಸಿವಾ ಅಂತಾ ಒಳಕ್ ಬಿಟ್ಕಳಿ.. ಒಳಕ್ಬಿಟ್ಕೊಂಡೋ..
ಕಂದಾ..
ಯಾಕಪ್ಪ ಅಳ್ತಿದ್ಯಾ? ಅಳಕ್ ನೀನ್ ಕಳ್ಕಂಡಿರದಾದ್ರೂ ಯೋನಪ್ಪಾ?
ಕಳ್ಕಳಕ್
ನೀನ್ ತಂದಿರದಾದ್ರೂ ಏನು? ನೀನ್ ಏನ್ ಕಳ್ಕಂಡಿದ್ಯೋ ಅದಿಲ್ಲೇ ಸಿಕ್ಕಿದ್ದು..
ನೆನ್ನೆ
ಯಾವನ್ದೋ ಆಗಿತ್ತು.. ನಾಳೆ ಇನ್ಯಾವನ್ದೋ ಆಗತ್ತೆ..
ಇನ್ನೋಂದು
ಬಾಟ್ಲು ತರಸಪ್ಪ.. ಪರಿವರ್ತನೆ ಪ್ರಕೃತಿಯ ನಿಯಮ.. ಏನಂತ್ಯಾ??
ಮೂರ್ನೇ
ಬಾಟ್ಲು ಬಂತು.. ಕಿಕ್ಕು ತಲೆಗ್ ಏರ್ತು..
ಆಗೋಗೌನೆ
ಟೈಟು.. ವೇದಾಂತ ಸ್ಟಾರ್ಟು...
ಎಣ್ಣೇನೆ
ಇಲ್ಲಿ ಸದಾ ಶಾಶ್ವತ.. ಮಿಕ್ಕಿದ್ದೆಲ್ಲ ನಶ್ವರ..
ಬಾರಲ್ಲೆ
ಬಂದು ಸೆಟ್ಲಾಯ್ತಿವಿ ನಾವು ವಾಸ್ತು ಪ್ರಕಾರ..